What Is Jowar Atta? – Benefits, Nutrition Facts, Composition, Recipes
…
ಸರ್ವಂ ತೇ ಅನ್ನಮವಿಷಂ ಕೃಣೋಮಿ ||[ಅಥರ್ವ ೮.೨.೧೯ ]
“ನಿನ್ನೆಲ್ಲ ಅನ್ನವನ್ನೂ ವಿಷರಹಿತವನ್ನಾಗಿ ಮಾಡುತ್ತೇನೆ.”
ನಮ್ಮ ಅನ್ನ ವಿಷಮಯವಾಗುವುದು ಹೇಗೆ? ಕೃಷಿಯನ್ನು ವಾಣಿಜ್ಯವನ್ನಾಗಿಸಿ, ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನೂ, ಕ್ರಿಮಿನಾಶಕ, ಕಳೆನಾಶಕ ವಿಷಗಳನ್ನೂ ಬಳಸಿದಾಗ!
ಕಾರ್ಖಾನೆಗಳ ಕೊಳೆಯನ್ನು ನೀರಿಗೆ ಬಿಟ್ಟು, ಆ ಕೊಳೆನೀರನ್ನು ಕೃಷಿಗೆ ಬಳಸಿದಾಗ!
ಆಹಾರವನ್ನು ಶೇಖರಿಸಿಟ್ಟು ಹೆಚ್ಚಿನ ಬೆಲೆ ಬಂದಾಗ ಮಾರಲು ಬಯಸಿ, ಶೇಖರಿಸಿಟ್ಟಾಗ ಹುಳು-ಇಲಿಗಳ ಕಾಟದಿಂದ ರಕ್ಷಿಸಲು ರಾಸಾಯನಿಕಗಳನ್ನು ಬಳಸಿದಾಗ!
ನಮ್ಮ ಅನ್ನವನ್ನು ಇತರರ ಬೆವರಿನಲ್ಲಿ ಬೇಯಿಸಿದಾಗ!
ಆಹಾರವನ್ನು ಶೇಖರಿಸಿಟ್ಟಾಗ ಹುಳು-ಇಲಿಗಳ ಕಾಟದಿಂದ ರಕ್ಷಿಸಲು ರಾಸಾಯನಿಕಗಳನ್ನು ಬಳಸಿದಾಗ!
ನಮ್ಮ ಅನ್ನವನ್ನು ಮೋಸ, ವಂಚನೆ, ಭ್ರಷ್ಟಾಚಾರಗಳಿಂದ ಸಂಪಾದಿಸಿದಾಗ!
ನಮ್ಮ ಅನ್ನವನ್ನು ಇತರರ ಶ್ರಮದ ಬೆವರಿನಲ್ಲಿ ಬೇಯಿಸಿದಾಗ!
ನಮ್ಮ ಶರೀರೇಂದ್ರಿಯ ಮನಸ್ಸುಗಳಿಗೆ ಹಿತವಲ್ಲದ ರಾಜಸ-ತಾಮಸ ಆಹಾರಗಳನ್ನು ತಿಂದಾಗ!
ಸಿಕ್ಕಿದ್ದೇ ಸಾಕೆಂದು ಮುಕ್ಕಿದಾಗ!
ಮೇಲಿನ ವ್ಯವಹಾರ, ಅವುಗಳ ಹಿಂದಿನ ವಿಷಕ್ಕೆ ಕಾರಣ ಎಂಬುದು ತಿಳಿಯದೇ ಇದ್ದಾಗ!
ಭಗವಂತನ ಆಶ್ವಾಸನೆಯಿದೆ. ನಾವು ನಮ್ಮ ಅನ್ನವನ್ನು ವಿಷರಹಿತ ಕೃಷಿಯಿಂದ (ಇಂದು ಅದರ ಹೆಸರು ಸಹಜ ಸಾವಯವ ಕೃಷಿ), ವ್ಯಾಪಾರೀ ದೃಷ್ಟಿಯಿಲ್ಲದೇ, ಸನ್ಮಾರ್ಗದಲ್ಲಿ, ನಮ್ಮದೇ ಬೆವರನ್ನು ಹರಿಸಿ, ಸಾತ್ವಿಕಾಹಾರವನ್ನೂ ಹಿತ-ಮಿತವಾಗಿ ಬಳಸಿ, ಅದರ ಹಿಂದಿರುವ ತಿಳಿವಳಿಕೆಯನ್ನೂ ದೃಢಪಡಿಸಿಕೊಂಡಾಗ ನಮ್ಮ ಆಹಾರ ವಿಷರಹಿತವಾಗಿರುತ್ತದೆ.
Sed ut perspiciatis unde omnis iste natus error voluptatem accusantium doloreue laudantiums totam rem aperiam abillo inventore